Friday, April 09, 2010

ನಾಲ್ಕು ರೊಟ್ಟಿ ಕಥೆ

ಒಂದಾನೊಂದು ಊರಿಲ್ಲಿ ಒಂದು ಮನೆ ಇದ್ದತ್ತಡ .ಆ ಮನೆಲ್ಲಿ ಒಬ್ಬ ಮಾಣಿ ಅವನ ಅಜ್ಜಿ-ಅಜ್ಜ,ಅಮ್ಮ-ಅಪ್ಪ,ಅಕ್ಕ-ಅಣ್ಣಂದ್ರೊಟ್ಟಿಂಗೆ ಇತ್ತಿದ್ದನಡ .ಅವಂಗೆ ಶಾಲೆಗೆ ಹೋಪಲೆ ಮನಸ್ಸೇ ಇತ್ತಿದ್ದಿಲ್ಲೆ.ಎಲ್ಲರೂ ಬೇರೆ ಬೇರೆ ಉಪಾಯ ಮಾಡಿ ಶಾಲೆಗೆ ಹೋಗು ಹೇಳಿರೂ ಅವ ಒಪ್ಪ.
ಹೀಂಗಿಪ್ಪಗ ಒಂದು ದಿನ ಅವನ ಅಜ್ಜಿ ಕೊಂಗಾಟಕ್ಕೆ ಅವನ ತೊಡೆಲ್ಲಿ ಕೂರ್ಸಿಯೊಂಡು ಹೇಳಿತ್ತಡ,'ಏ ಮುದ್ದು, ನೀನು ನಿನ್ನ ಅಕ್ಕ-ಅಣ್ಣಂದ್ರ ಹಾಂಗೆ ದಿನಾ ಶಾಲೆಗೆ ಹೋಯೆಕನ್ನೆ.ನೀನು ದಿನಾ ಶಾಲೆಗೆ ಹೊವ್ತಾರೆ ಆನು ನಿನಗೆ ತಿಂಬಲೆ ರೊಟ್ಟಿ ತಟ್ಟಿ,ಕಟ್ಟಿ ಕೊಡುವೆ.'
ರೊಟ್ಟಿ ಹೆಸರು ಕೇಳಿ ಮಾಣಿ ಬಾಯಿಲ್ಲಿ ನೀರು ಬಂತಡ. ಶಾಲೆಗೆ ಹೋಪಲೆ ಒಪ್ಪಿದನಡ. ಮರದಿನ ಉದೀಯಪ್ಪಗ ಮಾಣಿ ಶಾಲೆಗೆ ಹೆರಟದರ ಕಂಡು ಎಲ್ಲರಿಂಗೂ ಆಶ್ಚರ್ಯ ಆತಡ.'ಎಲಾ ಇವನಾ!'ಹೇಳಿ ಮೂಗಿನ ಮೇಲೆ ಬೆರಳು ಮಡುಗಿದವಡ.
ಅಜ್ಜಿ ಬೆಶಿ ಬೆಶಿ ರೊಟ್ಟಿಗೆ ತುಪ್ಪ ಸವರಿ, ಬಾಳೆ ಎಲೆಲ್ಲಿ ಸುರೂಟಿ,ವಸ್ತ್ರಲ್ಲಿ ಸುತ್ತಿ,ಮಾಣಿಯ ಕೈಗೆ ಕೊಟ್ಟತ್ತಡ.ರೊಟ್ಟಿಯ ಕಟ್ಟವ ಮಾಣಿ ಖುಶೀಲ್ಲಿ ಚೀಲದ ಒಳ ಮಡಿಕ್ಕೊಂಡು ಶಾಲೆಗೆ ಹೆರಟ .ದಾರಿಲ್ಲಿ ಒಂದು ದೊಡ್ಡ ಕಾಡಿತ್ತಿದ್ದಡ. ಅದರ ದಾಂಟುವಷ್ಟರಲ್ಲಿ ಮಾಣಿಗೆ ಜೋರು ಹಶು ಆತಡ.ಒಂದು ಹಳ್ಳಲ್ಲಿ ಕೈ ತೊಳದಿಕ್ಕಿ ಬೀಜದ ಮರ ದ ಅಡೀಲ್ಲಿ ಕೂದೊಂಡು ಚೀಲಂದ ರೊಟ್ಟಿ ಕಟ್ಟವ ತೆಗದು, ಎದುರು ಮಡುಗಿ, ಮೆಲ್ಲಂಗೆ ವಸ್ತ್ರದ ಗಂಟು ಬಿಡಿಸಿ, ಬಾಳೆ ಎಲೆಯನ್ನುದೆ ಬಿಡಿಸಿ,ರೊಟ್ಟಿಗಳ ಎಣಿಸಿಯೊಂಡ.
'ಒಂದು'
'ಎರಡು'
'ಮೂರು'
'ನಾಲ್ಕು'

ನಾಲ್ಕು ರೊಟ್ಟಿಗಳ ಕಂಡು ಮಾಣಿಗೆ ಖುಶಿಯೂ ಖುಶಿ.

ಮೆಲ್ಲಂಗೆ ಒಂದು ರೊಟ್ಟಿಯ ಕೈಲ್ಲಿ ತುಂಡು ಮಾಡಿ ಬಾಯಿಗೆ ಮಡುಗುವಷ್ಟ್ರಲ್ಲಿ ಒಂದು ಎಲಿ ಅಲ್ಲಿಗೆ ಬಂದು,'ಎನಗೆ ಜೋರು ಹಶುವಾವ್ತಾ ಇದ್ದು,ಎನಗೊಂದು ರೊಟ್ಟಿ ಕೊಡುವೆಯಾ?' ಹೇಳಿತ್ತಡ .
ಮಾಣಿ ರೊಟ್ಟಿ ನೋಡಿ,ಎಲಿಯ ನೋಡಿ ಜಾನ್ಸಿದ,'ಒಂದು ರೊಟ್ಟಿ ಕೊಟ್ಟರೆ ಇನ್ನು ಮೂರು ರೊಟ್ಟಿ ಎನಗೆ ಉಳಿತ್ತನ್ನೇ?ಎಲಿರಾಯನೆ,ಇದ ನಿನಗೊಂದು ರೊಟ್ಟಿ,ತಿನ್ನು'ಹೇಳಿಕ್ಕಿ ರೊಟ್ಟಿ ಕೊಟ್ಟನಡ .ಎಲಿ ಸಂತೋಷಲ್ಲಿ ರೊಟ್ಟಿ ತಿಂದಿಕ್ಕಿ,'ನೀನು ಎಲ್ಲಿಗೆ ಹೊವ್ತಾ ಇದ್ದೆ?' ಕೇಳಿತ್ತಡ.
ಮಾಣಿ,'ಆನು ಶಾಲೆಗೆ ಹೆರಟದು'ಹೇಳಿದ.
'ಓಹೋ!ಹಾಂಗಾರೆ ಆನು ನಿನಗೆ ಒಂದು ವಾಕ್ಯವ ಕಳುಶುತ್ತೆ.'ಇಲಿ ಕೆರೆದಂತೆ ಕೆರೆದ ,ಇಲಿ ಕೆರೆದಂತೆ ಕೆರೆದ..'
ನೀನು ಇದರ ಬಾಯಿಪಾಠ ಮಾಡಿರೆ ಯಾವಾಗಲಾದರೂ ಪ್ರಯೋಜನಕ್ಕೆ ಬಕ್ಕು'ಹೇಳಿಕ್ಕಿ ಎಲಿ ಅತ್ತೆ ತುರ್ಲನೆ ಚು..ಚು..ಹೇಳಿಯೊಂಡು ಓಡಿ ಹೋತಡ.
ಮಾಣಿ,'ಈಗ ರೊಟ್ಟಿ ತಿನ್ನುತ್ತಿಲ್ಲೆ, ರಜ್ಜ ಮುಂದೆ ಹೋಗಿಕ್ಕಿ ತಿಂತೆ 'ಹೇಳಿ ಉಳುದ ಮೂರು ರೊಟ್ಟಿಗಳ ಕಟ್ಟಿಯೊಂಡು 'ಇಲಿ ಕೆರೆದಂತೆ ಕೆರೆದ,ಇಲಿ ಕೆರೆದಂತೆ ಕೆರೆದ..' ಹೇಳಿಯೊಂಡು ನೆಡದ.

ಪುನಃ ಹಶುವಾತು ಹೇಳಿ ಒಂದು ಮಾವಿನ ಮರ ದ ಕೆಳ ಕೂದೊಂಡು ರೊಟ್ಟಿ ಕಟ್ಟವ ಬಿಡಿಸಿ ತಿಂಬಲಪ್ಪಗ ಅಲ್ಲಿಗೆ ಒಂದು ಕುಪ್ಪ್ಳು ಹಕ್ಕಿ ಬಂದು,,'ಎನಗೆ ಜೋರು ಹಶುವಾವ್ತಾ ಇದ್ದು,ಎನಗೊಂದು ರೊಟ್ಟಿ ಕೊಡುವೆಯಾ?' ಹೇಳಿತ್ತಡ .
ಮಾಣಿ ರೊಟ್ಟಿ ನೋಡಿ,ಕುಪ್ಪ್ಳು ನೋಡಿ ಜಾನ್ಸಿದ,'ಒಂದು ರೊಟ್ಟಿ ಕೊಟ್ಟರೆ ಇನ್ನು ಎರಡು ರೊಟ್ಟಿ ಎನಗೆ ಉಳಿತ್ತನ್ನೇ?ಕುಪ್ಪ್ಳಕ್ಕಾ,ಇದ ನಿನಗೊಂದು ರೊಟ್ಟಿ,ತಿನ್ನು'ಹೇಳಿಕ್ಕಿ ರೊಟ್ಟಿ ಕೊಟ್ಟನಡ. ಕುಪ್ಪ್ಳುಸಂತೋಷಲ್ಲಿ ರೊಟ್ಟಿ ತಿಂದಿಕ್ಕಿ,'ನೀನು ಎಲ್ಲಿಗೆ ಹೊವ್ತಾ ಇದ್ದೆ?' ಕೇಳಿತ್ತಡ.
ಮಾಣಿ,'ಆನು ಶಾಲೆಗೆ ಹೆರಟದು'ಹೇಳಿದ.
'ಓಹೋ!ಹಾಂಗಾರೆ ಆನು ನಿನಗೆ ಒಂದು ವಾಕ್ಯವ ಕಳುಶುತ್ತೆ.'ಕುಪ್ಪ್ಳು ಕುಳಿತಂತೆ ಕುಳಿತ,ಕುಪ್ಪ್ಳು ಕುಳಿತಂತೆ ಕುಳಿತ...'
ನೀನು ಇದರ ಬಾಯಿಪಾಠ ಮಾಡಿರೆ ಯಾವಾಗಲಾದರೂ ಪ್ರಯೋಜನಕ್ಕೆ ಬಕ್ಕು'ಹೇಳಿಕ್ಕಿ ಕುಪ್ಪ್ಳತ್ತೆ ಬುರ್ರನೆ ಕ್ಕು..ಕ್ಕು..ಕ್ಕು.. ಹೇಳಿಯೊಂಡು ಹಾರಿ ಹೋತಡ.
ಮಾಣಿ,'ಈಗ ರೊಟ್ಟಿ ತಿನ್ನುತ್ತಿಲ್ಲೆ, ರಜ್ಜ ಮುಂದೆ ಹೋಗಿಕ್ಕಿ ತಿಂತೆ 'ಹೇಳಿ ಉಳುದ ಎರಡು ರೊಟ್ಟಿಗಳ ಕಟ್ಟಿಯೊಂಡು 'ಇಲಿ ಕೆರೆದಂತೆ ಕೆರೆದ,ಇಲಿ ಕೆರೆದಂತೆ ಕೆರೆದ..ಕುಪ್ಪ್ಳು ಕುಳಿತಂತೆ ಕುಳಿತ,ಕುಪ್ಪ್ಳು ಕುಳಿತಂತೆ ಕುಳಿತ..' ಹೇಳಿಯೊಂಡು ನೆಡದ.

ಪುನಃ ಹಶುವಾತು ಹೇಳಿ ಒಂದು ಹಲಸಿನ ಮರ ದ ಕೆಳ ಕೂದೊಂಡು ರೊಟ್ಟಿ ಕಟ್ಟವ ಬಿಡಿಸಿ ತಿಂಬಲಪ್ಪಗ ಅಲ್ಲಿಗೆ ಒಂದು ಹೆಬ್ಬಾವು ಬಂದು,'ಎನಗೆ ಜೋರು ಹಶುವಾವ್ತಾ ಇದ್ದು,ಎನಗೊಂದು ರೊಟ್ಟಿ ಕೊಡುವೆಯಾ?' ಹೇಳಿತ್ತಡ .
ಮಾಣಿ ರೊಟ್ಟಿ ನೋಡಿ, ಹೆಬ್ಬಾವು ನೋಡಿ ಜಾನ್ಸಿದ,'ಒಂದು ರೊಟ್ಟಿ ಕೊಟ್ಟರೆ ಇನ್ನು ಒಂದು ರೊಟ್ಟಿ ಎನಗೆ ಉಳಿತ್ತನ್ನೇ?ಹೆಬ್ಬಾವಣ್ಣಾ ,ಇದ ನಿನಗೊಂದು ರೊಟ್ಟಿ,ತಿನ್ನು'ಹೇಳಿಕ್ಕಿ ರೊಟ್ಟಿ ಕೊಟ್ಟನಡ.ಹೆಬ್ಬಾವು ಸಂತೋಷಲ್ಲಿ ರೊಟ್ಟಿ ತಿಂದಿಕ್ಕಿ,'ನೀನು ಎಲ್ಲಿಗೆ ಹೊವ್ತಾ ಇದ್ದೆ?' ಕೇಳಿತ್ತಡ.
ಮಾಣಿ,'ಆನು ಶಾಲೆಗೆ ಹೆರಟದು'ಹೇಳಿದ.
'ಓಹೋ!ಹಾಂಗಾರೆ ಆನು ನಿನಗೆ ಒಂದು ವಾಕ್ಯವ ಕಳುಶುತ್ತೆ' ಹೆಬ್ಬಾವು ಮಲಗಿದಂತೆ ಮಲಗಿದ,ಹೆಬ್ಬಾವು ಮಲಗಿ ದಂತೆ ಮಲಗಿದ ..'
ನೀನು ಇದರ ಬಾಯಿಪಾಠ ಮಾಡಿರೆ ಯಾವಾಗಲಾದರೂ ಪ್ರಯೋಜನಕ್ಕೆ ಬಕ್ಕು'ಹೇಳಿಕ್ಕಿ ಹೆಬ್ಬಾವತ್ತೆ ಸರ್ರನೆ ಹರಕ್ಕೊಂಡು ಹೋತಡ.
ಮಾಣಿ,'ಈಗ ರೊಟ್ಟಿ ತಿನ್ನುತ್ತಿಲ್ಲೆ,ರಜ್ಜ ಮುಂದೆ ಹೋಗಿಕ್ಕಿ ತಿಂತೆ 'ಹೇಳಿ ಉಳುದ ಒಂದು ರೊಟ್ಟಿಯ ಕಟ್ಟಿಯೊಂಡು 'ಇಲಿ ಕೆರೆದಂತೆ ಕೆರೆದ,ಇಲಿ ಕೆರೆದಂತೆ ಕೆರೆದ..ಕುಪ್ಪ್ಳು ಕುಳಿತಂತೆ ಕುಳಿತ,ಕುಪ್ಪ್ಳು ಕುಳಿತಂತೆ ಕುಳಿತ..ಹೆಬ್ಬಾವು ಮಲಗಿದಂತೆ ಮಲಗಿದ,ಹೆಬ್ಬಾವು ಮಲಗಿದಂತೆ ಮಲಗಿದ ..' ಹೇಳಿಯೊಂಡು ನೆಡದ.

ಪುನಃ ಹಶುವಾತು ಹೇಳಿ ಒಂದು ನೇರಳೆ ಮರ ದ ಕೆಳ ಕೂದೊಂಡು ರೊಟ್ಟಿ ಕಟ್ಟವ ಬಿಡಿಸಿ ತಿಂಬಲಪ್ಪಗ ಅಲ್ಲಿಗೆ ಒಂದು ಮಂಗ ಬಂದು,'ಎನಗೆ ಜೋರು ಹಶುವಾವ್ತಾ ಇದ್ದು,ಎನಗೊಂದು ರೊಟ್ಟಿ ಕೊಡುವೆಯಾ?' ಹೇಳಿತ್ತಡ .
ಮಾಣಿ ರೊಟ್ಟಿ ನೋಡಿ, ಮಂಗನ ನೋಡಿ ಜಾನ್ಸಿದ,'ಒಂದು ರೊಟ್ಟಿ ಕೊಟ್ಟರೆ ಇನ್ನು ಎನಗೆ ರೊಟ್ಟಿ ಉಳಿಯನ್ನೇ? ಹೇಂಗಾರು ಕಸ್ತಲಾತು.ಆನು ಇನ್ನು ಮನೆಗೆ ಹೋವ್ತೆ. ಅಲ್ಲಿ ಅಜ್ಜಿಯ ಹತ್ರೆ ಹೇಳಿ ಬೇಶಿ ಬೇಶಿ ರೊಟ್ಟಿ ಮಾಡ್ಸಿ ತಿಂದರಾತು'ಹೇಳಿ,'ಇದ ಮಂಗಣ್ಣಾ ನಿನಗೊಂದು ರೊಟ್ಟಿ,ತಿನ್ನು'ಹೇಳಿಕ್ಕಿ ರೊಟ್ಟಿ ಕೊಟ್ಟನಡ.ಮಂಗ ಸಂತೋಷಲ್ಲಿ ರೊಟ್ಟಿ ತಿಂದಿಕ್ಕಿ,'ನೀನು ಎಲ್ಲಿಗೆ ಹೊವ್ತಾ ಇದ್ದೆ?' ಕೇಳಿತ್ತಡ.
ಮಾಣಿ,'ಆನು ಶಾಲೆಗೆ ಹೆರಟದು'ಹೇಳಿದ.
'ಓಹೋ!ಹಾಂಗಾರೆ ಆನು ನಿನಗೆ ಒಂದು ವಾಕ್ಯವ ಕಳುಶುತ್ತೆ,'ಇಂಗು ತಿಂದ ಮಂಗ ಓಡಿ ಹೋದ,ಇಂಗು ತಿಂದ ಮಂಗ ಓಡಿ ಹೋದ..'ನೀನು ಇದರ ಬಾಯಿಪಾಠ ಮಾಡಿರೆ ಯಾವಾಗಲಾದರೂ ಪ್ರಯೋಜನಕ್ಕೆ ಬಕ್ಕು'ಹೇಳಿಕ್ಕಿ ಮಂಗತ್ತೆ ಛಂಗನೆ ಮರಂದ ಮರಕ್ಕೆ ಹಾರಿಯೊಂಡು ಹೋತಡ.

ಮಾಣಿ,ಹಶು ಆಗಿಯೊಂಡು ಮನೆಗೆ ವಾಪಾಸ್ ನೆಡದ.ಹಶು ಮರವಲೆ ದಾರಿ ಉದ್ದಕ್ಕೂ
''ಇಲಿ ಕೆರೆದಂತೆ ಕೆರೆದ,ಇಲಿ ಕೆರೆದಂತೆ ಕೆರೆದ..''
''ಕುಪ್ಪ್ಳು ಕುಳಿತಂತೆ ಕುಳಿತ,ಕುಪ್ಪ್ಳು ಕುಳಿತಂತೆ ಕುಳಿತ..''
''ಹೆಬ್ಬಾವು ಮಲಗಿದಂತೆ ಮಲಗಿದ,ಹೆಬ್ಬಾವು ಮಲಗಿದಂತೆ ಮಲಗಿದ ..''
''ಇಂಗು ತಿಂದ ಮಂಗ ಓಡಿ ಹೋದ,ಇಂಗು ತಿಂದ ಮಂಗ ಓಡಿ ಹೋದ..''
ಹೇಳಿಯೊಂಡು ಮೆಲ್ಲಂಗೆ ಮನೆಗೆ ಹೋದ.
ಮನೆಲ್ಲಿ ಎಲ್ಲರೂ ಮಾಣಿ ಬಪ್ಪ ದಾರಿಯನ್ನೇ ನೋಡಿಯೊಂಡಿತ್ತಿದ್ದವಡ.ಮಾಣಿ ಎತ್ತಿದ ಕೂಡಲೇ ಎಲರೂ 'ಎಂತ ಆತು?ಶಾಲೆಲ್ಲಿ ಎಂತ ಕಲ್ತೆ?'
ಮಾಣಿ,'ಆನು ಇಂದು ಶಾಲೆಗೆ ಎತ್ತಿದ್ದಿಲ್ಲೆ' ಹೇಳಿಯಪ್ಪಗ ಅವನ ಅಪ್ಪ ಕೋಪಲ್ಲಿ,'ಹಾಂಗಾರೆ ಇಂದಿರುಳು ಹೆರಾಣ ಚಾವಡಿಲ್ಲಿ ಒರಗು'ಹೇಳಿದನಡ.
ಮಾಣಿ ಹಶುವಾಗಿ, ದುಃಖಲ್ಲಿ,ಹೆದರಿಯೊಂಡು ಮೆಲ್ಲಂಗೆ ಆಚಿಗೆ ಈಚಿಗೆ ನೋಡಿ ,ಮನೆ ಹತ್ರೆ ಇಪ್ಪ ಹಟ್ಟಿಗೆ ಹೋಗಿ ದನಗಳ ಹತ್ರೆ ಅವನ ದುಃಖವ ಹೇಳಿಯೊಂಡು,ಬಚ್ಚ್ಚಿ,ಅಲ್ಲಿಯೇ ಅಟ್ಟಲ್ಲಿ ಒರಗಿದನಡ.
ನಡು ಇರುಳು ಒಬ್ಬ ಕಳ್ಳ ಮನೆಗೆ ನುಗ್ಗ್ಲೆಒಂದು ಕಬ್ಬಿಣದ ಸರಳಿಲ್ಲಿ ಮೆಲ್ಲಂಗೆ ಗೋಡೆ ಕೆರವಲೆ ಶುರು ಮಾಡಿದ.
ಅದೇ ಸಮಯಕ್ಕೆ ಅಲ್ಲೇ ಹತ್ತರೆ ಹಟ್ಟಿಲ್ಲಿ ಚಳಿಗೆ,ಹಶುವಿಲ್ಲಿ,ಮಾಣಿಗೆ ಎಚ್ಚ್ಚರಿಕೆ ಆತು.ಹೊತ್ತು ಹೋಪಲೆ ಆ ದಿನ ಅವ ಕಲ್ತದರ ದೊಡ್ಡಕ್ಕೆ ಹೇಳಲೆ ಶುರು ಮಾಡಿದ.
''ಇಲಿ ಕೆರೆದಂತೆ ಕೆರೆದ,ಇಲಿ ಕೆರೆದಂತೆ ಕೆರೆದ..'' ಕಳ್ಳ ಕೂಡಲೆ ಗೋಡೆ ಕೆರವದರ ನಿಲ್ಲ್ಸಿಸುಮ್ಮನೆ ಕೂದ.
ಮಾಣಿ, ''ಕುಪ್ಪ್ಳು ಕುಳಿತಂತೆ ಕುಳಿತ,ಕುಪ್ಪ್ಳು ಕುಳಿತಂತೆ ಕುಳಿತ..'' ಇದರ ಕೇಳಿ ಕಳ್ಳ,'ಆರೋ ಎನ್ನ ನೋದೆಂಡಿದ್ದ ಹಾಂಗೆ ಕಾಣ್ತು'ಹೇಳಿ ಅಲ್ಲೇ ನೆಲಲ್ಲಿ ಚುರೂಟಿ ಮನುಗಿದ.
ಮಾಣಿ,''ಹೆಬ್ಬಾವು ಮಲಗಿದಂತೆ ಮಲಗಿದ,ಹೆಬ್ಬಾವು ಮಲಗಿದಂತೆ ಮಲಗಿದ ..'' ಕಳ್ಳಂಗೆ ಹೆದರಿಕೆ ಆತಡ.'ಇನ್ನು ಇಲ್ಲಿ ಒಂದು ನಿಮಿಷ ಇದ್ದರೆ ಎನ್ನ ಖಂಡಿತ ಹಿಡಿಗು'ಹೇಳಿ ಅಲ್ಲಿಂದ ಓಡಿದ.
ಮಾಣಿ,''ಇಂಗು ತಿಂದ ಮಂಗ ಓಡಿ ಹೋದ,ಇಂಗು ತಿಂದ ಮಂಗ ಓಡಿ ಹೋದ..'' ಹೇಳಿಯಪ್ಪಗ ಓಡುವ ಬರಲ್ಲಿ ಮನೆ ಹೆರ ಮಡುಗಿದ ಕೊಡಪ್ಪಾನ,ಪಾತ್ರೆಗಳ ರಾಶಿ ಮೇಲೆ ಕಳ್ಳ ಡಂಕಿ,ದಡಬಡ,ಶಬ್ದ ಆತಡ.
ಮನೆಯವು,ಮಾಣಿ ಎಲ್ಲರೂ ಎದ್ದು ಬಂದು ಕಳ್ಳನ ಹಿಡುದು,ಕಟ್ಟಿ ಹಾಕಿದವಡ.ಎಲ್ಲರೂ ಮಾಣಿಯ ಬೆನ್ನು ತಟ್ಟಿ ಅವನ ಮನೆ ಒಳ ಕರಕ್ಕೊಂಡು ಹೋಗಿ ರುಚಿ ರುಚಿ ಅಡುಗೆ ಮಾಡಿ ಬಡಿಸಿದವಡ.
ಮಾಣಿ ಎಲ್ಲವನ್ನೂ ಗಬ ಗಬನೆ ಹೊಟ್ಟೆತುಂಬ ತಿಂದಿಕ್ಕಿ ಅಜ್ಜಿ ಕಥೆ ಕೇಳಿಯೊಂಡು ಒರಗಿದನಡ.

ಹೀಂಗಿಪ್ಪ ಕಥೆ.



































Thursday, April 01, 2010

Dare to care

Yesterday I met an elderly couple (EC) from our earlier neighborhood and we were talking about the happenings in the neighborhood that comprises mostly of seniors. 

I learnt that one 'uncle' (as I would address him) is not keeping very well and that he is under hospice care; that another 'aunt' has serious health problems and that one more couple continues to enjoy their time traveling. I also inquired about the elderly lady, who was the mother of the 'aunt' that liked to travel. She lived next door to the 'mobile couple' all by herself. I was happy to hear that she was doing very well and that she had recently returned from a long road trip. In this context, EC mentioned that they were in charge of watching out for the elderly lady in the absence of the mobile couple. They have, apparently, worked out a wellness-signaling protocol between the elderly lady they were to watch out for: the lady closes her drapes in the night and promptly opens them in the morning. EC watches out for her open drapes in the morning and are assured of her well-being. 

Caring for seniors can be difficult for various reasons. My heart was warmed when I heard this mechanism of seniors caring for seniors in the neighborhood. The earth continues to be a nice place to live. Long live the elderly treasures of our neighborhood!