Thursday, March 18, 2010

ಅಜ್ಜಿ ಕಥೆ

ಸಣ್ಣಾಗಿಪ್ಪಗ ಬೇಸಿಗೆ ರಜೆಲ್ಲಿ ಅಜ್ಜನ ಮನೆಗೆ ಹೋದಿಪ್ಪಗೆಲ್ಲಾ ಮಧ್ಯಾಹ್ನ ಉಂಡಿಕ್ಕಿ ಹಿರಿಯವು ಪಟ್ಟಾಂಗವೋ , ಒರಗಿಯೊಂಡೋ ಇಪ್ಪಗ ,ಮಕ್ಕೊ ಎಲ್ಲಾ ಸೇರಿ 'ಮರಿಮನೆ ಅಜ್ಜಿ' ಮನೆಗೆ ಹೋಪದು.ಮರಿಮನೆ ಅಜ್ಜಿ ಮನೆಗೆ ಹೋಪಲೆ ಕಾರಣಂಗೊ ಸುಮಾರು.
ಅಜ್ಜನ ಮನೆ ಹೆರ ಒಂದು ಹಟ್ಟಿ ಇಕ್ಕು.ಹಟ್ಟಿ ಹಿಂದೆ ಹೋದರೆ ಒಂದು ತೋಡು.ತೋಡು ದಾಂಟಿ ಮರದ ಬೇರು ಹಿಡುದು ಮೇಲೆ ಹತ್ತಿರೆ 'ಮರಿಮನೆ' ಜಾಲು.ಜಾಲಿಡೀ ಒಣಗ್ಲೆ ಹರಡಿದ ಆಡಕ್ಕೆ,ಎದೂರು ಕಂಬುಳಿ ಹಣ್ಣಿನ ಮರ,ಮನೆ ಒಳ ಮರಿಮನೆ ಅಜ್ಜಿದೆ ಅವರ ಮಗಳು ವಿಜಯ.
ಅಜ್ಜನ ಮನೆ ಹಟ್ಟಿಲ್ಲಿ ಇಪ್ಪ ಎಮ್ಮೆ ,ದನ-ಕರುಗೊಕ್ಕೆಲ್ಲಾ ಎಂಗೊ ಹೋದಿಪ್ಪಗ ಹುಲ್ಲೋ ಹುಲ್ಲು !ಮರಿಮನೆಗೆ ಹೋಪಗ ದಾರಿಲ್ಲಿ ಒಂದರಿ ಪ್ರಾಣಿಗಳ ವಿಚಾರಿಸದಿದ್ದರೆ ಹೇಂಗೆ ?ಹಟ್ಟಿಯ ಅಟ್ಟಲ್ಲಿ ಓಶಿ ಮಾಡಿದ ಮುಳಿ,ಬೈಹುಲ್ಲಿನ ಕಟ್ಟವ ಕೆಳ ಎಳದು,ಬಿಡಿಸಿ,ತಿನ್ಸಿಕ್ಕಿ,ಎಮ್ಮೆಗೆ ನಕ್ಕ್ಲೆ ಕಾಲೊಡ್ಡಿ, ಅಲ್ಲಿಂದ ತೋಡು ದಾಂಟುವಾಗ ನೀರಿದ್ದರೆ ಆಡಿಕ್ಕಿ,ಇಲ್ಲದಿದ್ದರೆ ಅಲ್ಲಿಪ್ಪ ಸಗಣದ ಮೇಲೆ ಕಲ್ಲು ಇಡುಕ್ಕಿಕ್ಕಿ ,ಮರಿಮನೆ ಜಾಲು ಹತ್ತಿ,ಜಾರುವ ಅಡಕ್ಕೆಯ ಮೇಲೆಂದ ಜಾಗ್ರೆತೆಲ್ಲಿ ನೆಡಕ್ಕೊಂಡು ಮನೆ ಒಳ ಹೋಗಿ, ಅಜ್ಜಿಯ ಸುತ್ತಲೂ ಮನಿಕ್ಕೊಂಡು 'ಕಥೆ ಹೇಳಿ ಅಜ್ಜಿ ' ಹೇಳಿಯಪ್ಪಗ ಅಜ್ಜಿ ಮೋರೆಲ್ಲಿ ಒಂದು ನೆಗೆ.ಅಜ್ಜಿ ಕಥೆ ಶುರು ಮಾಡಿರೆ,ಮುಗಿವ ವರೆಗೆ ಆರುದೆ ಕಣ್ಣು ಬಾಯಿ ಮುಚ್ಚ್ಚದ್ದೆ ಕಥೆ ಒಳಾಂಗೆ ಹೋಗಿ ಹೆರ ಬಪ್ಪಷ್ಟ್ರಲ್ಲಿ ಕಾಪಿಯ ಹೊತ್ತು!ಆಚಿಗೆಂದ ದೆನಿಗೋಳುದು ಕೇಳಿಯಪ್ಪಗ ಎಲ್ಲರೂ ಮನಸ್ಸಿಲ್ಲದ್ದ ಮನಸ್ಸಿಲ್ಲಿ ಮೆಲ್ಲಂಗೆ ಹೆರ ಹೋಗಿಯಪ್ಪಗ ಕೆಂಪು-ಕಪ್ಪು ಕಂಬುಳಿ ಹಣ್ಣು ಮರಲ್ಲಿಪ್ಪದು
ಕಂಡು,ಅದನ್ನುದೆ ಬೇಕಾಷ್ಟು ತಿಂದು ಮನೆಗೆ ವಾಪಾಸ್.
ಮರಿಮನೆ ಅಜ್ಜಿ ಹೇಳಿಯೊಂಡಿತ್ತಿದ್ದ ನೆಂಪಿಪ್ಪ ಕೆಲವು ಕಥೆಗೊ ........

1 comment:

  1. True.. this reminds many of us of our interactions with our grandmothers or grandmother-like persons. Days were long and we had so much time for several things...

    ReplyDelete